Miscelaneous/ಕಿಚಡಿ ಲೇಖನಗಳು

  • -
    ಲಿಂಗ ಸ್ವರೂಪದ ವಿಕಾಸ

    ಲಭ್ಯವಾಗಿರುವ ತೀರ ಪ್ರಾಚೀನ ಲಿಂಗವೆಂದರೆ (ಕ್ರಿ. ಪೂ. 2) ಗುಡಿಮಲ್ಲಂ ಲಿಂಗ (ಆಂಧ್ರ ಪ್ರದೇಶ, ರೇಣುಗುಂಟ). ಇದು ಗಂಡಿನ ಜನನಾಂಗವನ್ನು ಯತಾವತ್ತಾಗಿ ಹೋಲುತ್ತದೆ. ಇದಕ್ಕೂ ಇಂತಹ ಲಿಂಗವನ್ನು ಪೂಜಿಸುತ್ತಿದ್ದ ಉಬ್ಬುಚಿತ್ರದ ಪುರಾವೆಗಳು ಪತ್ತೆಯಾಗಿವೆ.

    ಕ್ರಿ. ಶ. 6-7ನೆಯ ಶತಮಾನದ ಕಾಲಕ್ಕೆ ಇದು "ತ್ರಿದಿ” (tripartite) ರೂಪಕ್ಕೆ ತಿರುಗುತ್ತದೆ. ಹಿಂದಿನ ತುದಿಯು "ಬ್ರಹ್ಮಸೂತ್ರ”ದ ಗೆರೆಗಳ ರೂಪ ತಾಳಲಾರಂಭ. (ವರಹಾಮಿಹಿರನ «ಬೃಹತ್‌ಸಂಹಿತೆ» ಕ್ರಿ. ಶ. 6, ತುಸು ನಂತರದ «ವಿಷ್ಣುಧರ್ಮೋತ್ತರ» ಗಳಲ್ಲಿ ಇದರ ವಿವರಗಳು ದೊರೆಯುತ್ತವೆ.)

    ಬಾದಾಮಿ ಚಾಲುಕ್ಯರು ಕಟ್ಟಿಸಿದ ಹಲವು ದೇಗುಲಗಳಲ್ಲಿ (ಕ್ರಿ. ಶ. 6-7) ಲಿಂಗದ ಕೊನೆಯ ರೂಪ. ನಡುವಿನ ಭಾಗ ನೀರು ಹರಿಸುವ (ಅಭಿಶೇಖದ) "ಕಾಲುವೆ” ರೂಪದಾಳುತ್ತದೆ. ಇಂದಿನ ಪೀಠ ಇರುವ ಲಿಂಗ ಇದೇ. ಲೇಖನಕ್ಕೆ ಹೋಗಿ

  • -
    ರೋಬಾಟುಗಳು ಬಿಸ್ಕತ್ತು ತಿನ್ನುತ್ತವೆಯೇ?

    ಆರ್ಟ್‌ ಬುಚಾಲ್ಡ (Art Buhwald, 1925-2007) Humorist (ವಿಡಂಬನೆ ಲೇಖಕ ಸೂಕ್ತ ಹೆಸರು) ಎಂದೇ ಖ್ಯಾತಿ ಪಡೆದವರು. ಅವರ ವಾಶಿಂಗ್‌ಟನ್ ಪೋಸ್ಟ‌ನ ಕಾಲಂ ಅದರ ಜನಪ್ರಿಯತೆಯ ಉತ್ತುಂಗದಲ್ಲಿ ದಕ್ಷಿಣ ಭಾರತದ ಇಂಗ್ಲೀಶ್ ದೈನಿಕ "ದಿ ಹಿಂದೂ" ಸೇರಿದಂತೆ 550 ದಿನಪತ್ರಿಕೆಗಳಲ್ಲಿ ಬರುತ್ತಿತ್ತು. ಅವರ ಬರಹದ ಶಕ್ತಿಯಿದ್ದುದು ತೀರ ಜಟಿಲ ವಿಶಯಗಳನ್ನು ವಿಡಬನೆಯ (satire) ಕಲ್ಪಿತ ಕಥೆಗಳ ಮೂಲಕ ಹೇಳುವುದು.

    ದಶಕಗಳ ಹಿಂದೆ ಅವರ ಇಂತಹ ಒಂದು ಬರಹವೇ ಇದಕ್ಕೆ ಸ್ಪೂರ್‍ತಿ. ಭಿನ್ನ ಸನ್ನಿವೇಶಕ್ಕೆ ಮರುರೂಪಿಸಿದ್ದು.
    ಮಾರುಕಟ್ಟೆ, ಕೊಳ್ಳುವ ಶಕ್ತಿ ಮುಂತಾದ ಗಹನವಾದ ಆರ್ಥಿಕ ಚಿಂತನೆಗಳನ್ನು ಸರಳವಾಗಿ ಕಥೆಯ ಮೂಲಕ ಲೇಖಕರು ಹಿಡಿದಿಟ್ಟಿದ್ದರು. ಇಲ್ಲಿ 'ಸಂದರ್ಭ1 ತನ್ನ ಗೆಳೆಯ 'ಅಚಾನಕ್‌'ನೊಂದಿಗಿನ ಸಂವಾದದಲ್ಲಿ ಅಡಕವಾಗಿದೆ. ಎಲ್ಲವನ್ನೂ ರೊಬಾಟ್‌ಗಳೇ ಮಾಡಿದರೆ ಏನಾಗುತ್ತದೆ? ಓದಿ!! ಲೇಖನಕ್ಕೆ ಹೋಗಿ