ಮಾತ್ರಾಗಣ ಛಂದಸ್ಸು

ಛಂದಸ್ಸು ಸೂಚಕಕ್ಕೆ ಹೋಗಲು ಕ್ಲಿಕ್ಕಿಸಿ

ಶರ ಷಟ್ಪದಿ (3/6): ಪ್ರತಿ ಪಾದದಲ್ಲಿಯೂ 4 ಮಾತ್ರೆಯ ಗಣ, 1,2,4,5ರಲ್ಲಿ ಎರಡು ಗಣಗಳು ಮತ್ತು 3,6ನೆಯ ಸಾಲುಗಳಲ್ಲಿ ಮೂರು ಗಣಗಳು ಮತ್ತು ಒಂದು ಗುರು (ಅಥವಾ ಲಘು) ಹೆಚ್ಚುವರಿ. ‘U – U’ (ಜಗಣ) ಯಾವ ಗಣದಲ್ಲಿಯೂ ಬರಕೂಡದು.
4|4
4|4
4|4|4|
4|4
4|4
4|4|4|
ಈಶನ |ಕರುಣೆಯ
ನಾಶಿಸು | ವಿನಯದಿ
ದಾಸನ | ಹಾಗೆಯೆ | ನೀ ಮನ | ವೇ
ಕ್ಲೇಶದ | ವಿಧ ವಿಧ
ಪಾಶದ | ಹರಿದು ವಿ
ಲಾಸದಿ | ಸತ್ಯವ | ತಿಳಿ ಮನ | ವೇ
ಕುಸುಮ ಷಟ್ಪದಿ (3/6): ಪ್ರತಿಗಣದಲ್ಲಿಯೂ 5 ಮಾತ್ರೆಗಳು, 1,2,4,5 ಸಾಲುಗಳಲ್ಲಿ 2 ಗಣಗಳು ಮತ್ತು 3,6 ಪಾದಗಳಲ್ಲಿ 3 ಗಣಗಳು + ಗು
5|5
5|5
5|5|5|ಗು|
5|5
5|5
5|5|5|ಗು|
ನಾಡುಮನ |ಸಿಜನೊಲವಿ|
ನಾಡು ವೆಡೆ |ಸಂತತಂ |
ಬೀಡು ರತಿ |ಪತಿಗೆ ಸತ|ತ ನಿಧಾನ|ವು|
ನೋಡಿದ ನಿ|ಮಿಷ ಪತಿಗೆ|
ಮಾಡುವುದು |ವಿನಯವನು|
ನಾಡಾದಿ|ಯವರ್ಗೆ ಬ|ಣ್ಣಿಸಲು ಮೊ|ಗ್ಗೇ
 
ಭೋಗ ಷಟ್ಪದಿ (3/6) : ಪ್ರತಿ ಪಾದದಲ್ಲಿಯೂ 3 ಮಾತ್ರೆಗಳ ಗಣ, 1,2,4,5 ಸಾ. 4 ಗಣಗಳು 3,6ನೆಯ ಸಾಲಿನಲ್ಲಿ 6 ಗಣಗಳು + ಗುರು/ಲಘ.
3|3|3|3
3|3|3|3
3|3|3|3|3|3|ಗು|
3|3|3|3
3|3|3|3
3|3|3|3|3|3|ಗು|
ತಿರುಕ|ನೋರ್ವ|ನೂರ| ಮುಂದೆ
ಮುರುಕು| ಧರ್ಮ|ಶಾಲೆ|ಯಲ್ಲಿ
ವೊರಗಿ|ರುತ್ತ|ಲೊಂದು| ಕನಸ|ಕಂಡ|ನೆಂತ|ನೆ
ಪುರದ |ರಾಜ|ಸತ್ತ|ನವಗೆ
ವರ ಕು|ಮಾರ|ರಿಲ್ಲ|ದಿರಲು
ಕರಿಯ| ಕೈಗೆ| ಕುಸುಮ| ಮಾಲೆ|ಯಿತ್ತು| ಪುರದೊ|ಳು;
 
ಭಾಮಿನಿ ಷಟ್ಪದಿ : (3/6) 3ರ ಮತ್ತು 4 ಮಾತ್ರೆಗಳ ಗಣಗಳು. 1, 2, 4, 5 ಸಾ. 3, 4ರ ಎರಡು ಗಣಗಳು, 3,6ನೆಯ ಸಾಲಿನಲ್ಲಿ 3,4ರ 3 ಗಣಗಳು + ಗು/ಲ . ಆದಿಪ್ರಾಸದಿಂದ ಕೂಡಿರುತ್ತದೆ
3|4|3|4
3|4|3|4
3|4|3|4|3|4|ಗು|
3|4|3|4
3|4|3|4
3|4|3|4|3|4|ಗು|
ವೇದ| ಪುರುಷನ | ಸುತನ| ಸುತನ ಸ
ಹೋದ|ರನ ಹೆ|ಮ್ಮಗನ| ಮಗನ ತ
ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ
ಕಾದು| ಗೆಲಿದನ|ನಣ್ಣ|ನವ್ವೆಯ
ನಾದಿ|ನಿಯ ಜಠ|ರದಲಿ| ಜನಿಸಿದ
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
 
ಪರಿವರ್ಧಿನಿ ಷಟ್ಪದಿ: (3/6) ಗಣದ ಮಾತ್ರೆ 4, 1,2,4,5 ಸಾ. 4 ಗಣಗಳು, 3,6ನೆಯ ಸಾ. 6 ಗಣಗಳು + ಗು/ಲ.
4|4|4|4
4|4|4|4
4|4|4|4|4|4|ಗು|
4|4|4|4
4|4|4|4
4|4|4|4|4|4|ಗು|
ಸ್ಮರವಾ|ಜ್ಯದ ಮೈ|ಸಿರಿ ಶೃಂ|ಗಾರದ
ಶರನಿಧಿ|ರತಿ ನಾ|ಟ್ಯದರಂ|ಗಸ್ಥಳ
ವಿರಹದ| ನೆಲೆವೀ|ಡೋಪರ|ಕೂರಾ|ಟದ ಕೊಸ|ರಿನ ಗೊ|ತ್ತು
ಸರಸರ |ಸಂತವ|ಣೆಯ ಮನೆ |ಸುಗ್ಗಿಯ
ಪೊರವಾ|ಗರ ಭಾ|ವಾಲಯ| ವಪ್ಪಂ
ತಿರೆಪೇ|ರೆದನ ಮ|ರುಕವನು| ದೇಪಮ|ಹೀಪತಿ| ಕನ್ನಡಿ|ಸಿ
 
ವಾರ್ಧಕ ಷಟ್ಪದಿ: (3/6) ಗಣದ ಮಾತ್ರೆ 5, 1,2,4,5 ಸಾ. 4 ಗಣಗಳು, 3,6ನೆಯ ಸಾ. 6 ಗಣಗಳು + ಗು/ಲ.
5|5|5|5
5|5|5|5
5|5|5|5|5|5|ಗು|
5|5|5|5
5|5|5|5
5|5|5|5|5|5|ಗು|
ಬಲ್ಗಯ್ಯ | ನೃಪರಂಜಿ | ತಡೆಯದೆರ | ಘೂದ್ವಹನ
ಸೊಲ್ಗೇಳಿ | ನಮಿಸಲಿಳೆ | ಯೊಳ್ ಚರಿಸು | ತಧ್ವರದ
ನಲ್ಗುದುರೆ | ಬಂದು ವಾ | ಲ್ಮೀಕಿಯನಿ | ಜಾಶ್ರಮದ | ವಿನಿಯೋಗ | ದು ಪವನದೊ| ಳು
ಪುಲ್ಗಳಪ | ಸುರ್ಗೆಳಸಿ | ಪೊಕ್ಕಡಾ | ತೋಟಗಾ
ವಲ್ಗೆತ | ನ್ನೊಡನಾಡಿ | ಗಳಕೂಡಿ | ಲೀಲೆಮಿಗೆ
ಬಿಲ್ಗೊಂಡು | ನಡೆತಂದ | ವಂಕಂಡ | ನರ್ಚಿತಸು | ವಾಜಿಯಂ | ವೀರಲವ | ನು
 
ಉದ್ದಂಡ ಷಟ್ಪದಿ: (3) 3,6ನೆಯ ಸಾಲಿನಲ್ಲಿ ಒಂದು ಗುರು (ಅಥವಾ ಲಘು) ಹೆಚ್ಚುವರಿ.
4|4|4|4|4
4|4|4|4|4
4|4|4|4|4|4|4|4
4|4|4|4|4
4|4|4|4|4
4|4|4|4|4|4|4|4
ಪರಿಕಿಪೊಡೀಕೃತಿ | ಗಾವುದು | ಮೊದಲೆನೆ | ಹಳಚುವ |
ತೆರೆಯೊಳು | ತಿರುಗುವ | ಕರಿಮಕ | ರಂಗಳ | ಪುಚ್ಛೋ
|ತ್ಕರಹತಿ | ಯಿಂ ಚೆ | ಲ್ಲಿದ ಮಣಿ | ಗಳ ಬೆಳ | ಗಿಂ ಶ್ವೇ | ತದ್ವೀ | ಪವನಣ | ಕಿಸುತ[ತ] ||
ಹೆಚ್ಚುವರಿಯಾಗಿ [ತ] ಬರದಿದ್ದರೆ ವಾರ್ಧಕ ಷಟ್ಪದಿ? ( ಉದ್ಧಂಡ ಷಟ್ಪದಿ ಕನ್ನಡ ಛಂದಸ್ಸು ನೋಡಿ)

 

ಮೂರು ಸಾಲುಗಳ ಮಾತ್ರ

ಉತ್ಸಾಹ ರಗಳೆ-1: (2) ಸಾಲುಗಳಿಗೆ ಮಿತಿಯಿಲ್ಲ (ಇಲ್ಲಿ 2 ಸಾ. ಬಳಸಲಾಗಿದೆ), ಪ್ರತಿ ಸಾಲಿನಲ್ಲಿ 3 ಮಾತ್ರೆಗಳ 4 ಗಣಗಳು
3|3|3|3
3|3|3|3
ತುಂಬಿವಿಂಡಿನಂತೆ ಪಾಡಿ
ಚಕ್ಕವಕ್ಕಿಯಂತೆ ಕೂಡಿ.
ಉತ್ಸಾಹ ರಗಳೆ-2: (2) ಸಾಲುಗಳಿಗೆ ಮಿತಿಯಿಲ್ಲ (ಇಲ್ಲಿ 2 ಸಾ. ಬಳಸಲಾಗಿದೆ), ಪ್ರತಿ ಸಾಲಿನಲ್ಲಿ 3 ಮಾತ್ರೆಗಳ 4 ಗಣಗಳು
3|3|3
3|3|3|ಗು|
ಮಾವಿನಡಿಯೊಳಾಡುತುಂ
ಪಾಡನೆಯ್ದೆ ಕೇಳುತುಂ
ಮಂದಾನಿಲ ರಗಳೆ-1/2: (2) ಸಾಲುಗಳಿಗೆ ಮಿತಿಯಿಲ್ಲ (ಇಲ್ಲಿ 2 ಸಾ. ಬಳಸಲಾಗಿದೆ), ಪ್ರತಿ ಸಾಲಿನಲ್ಲಿ 3,5 ಮಾತ್ರೆಗಳ 2 ಗಣಗಳು
3|5|3|5
3|5|3|5
ನಂದ|ನಂಗಳೊಳ್ । ಸುಳಿವ । ಬಿರಯಿಯಿಂ
ಕಂಪು । ಕಣ್ಮಲೆಯೆ । ಪೂತ |ಸುರಯಿಯಿಂ
ಲಲಿತ ರಗಳೆ: (2) ಸಾಲುಗಳಿಗೆ ಮಿತಿಯಿಲ್ಲ (ಇಲ್ಲಿ 2 ಸಾ. ಬಳಸಲಾಗಿದೆ), ಪ್ರತಿ ಸಾಲಿನಲ್ಲಿ 5 ಮಾತ್ರೆಗಳ 4 ಗಣಗಳು
5|5|5|5
5|5|5|5;
ವಿಷಯ ವಿಷವಲ್ಲಿಯಂ ಪೆರ್ಚಿಸುವ ಜಲಧಾರೆ
ಸಾಧುತ್ವಮಂ ಕಿಡಿಸಿ ನಡೆಸುವ ದುರಾಚಾರೆ
ಕಂದ ಪದ್ಯ: (4) ಸಾಲುಗಳು 4 , 1, 3 ಸಾ. 4 ಮಾತ್ರೆಗಳ 3 ಗಣಗಳು,
4|4|4
4|4|4|4|4
4|4|4
4|4|4|4|4
ಕಾವೇ | ರಿಯಿಂದ | ಮಾ ಗೋ |
ದಾವರಿ | ವರಮಿ |ರ್ಪ. ನಾಡ | ದಾ ಕ | ನ್ನಡದೊಳ್
ಭಾವಿಸಿ | ದ ಜನಪ | ದಂ ವಸು|
ಧಾವಳ | ಯವಿಲೀ | ನ. ವಿಶದ | ವಿಷಯವಿಶೇಷಂ||

ಸಂಸ್ಕೃತ ಛಂದಸ್ಸು

ಗಾಯತ್ರಿ (3) 3 ಪಾದಗಳು ಪ್ರತಿ ಪಾದಕ್ಕೂ 8 ಅಕ್ಕರಗಳು, ಪಾದದ ಕೊನೆಯದು ಲಗದ್ವಯ ಅಥವಾ ದ್ವಿಲಗ (u-u-)
ಅಗ್ನಿಮೀಳೇ । ಪುರೋಹಿತಂ ।
ಯಜ್ಞಸ್ಯ ದೇ । ಮಮೃತ್ವಿಜಂ
ಹೋತಾರಂರ । ತ್ನಧಾತಮಂ (ಪು 24)
ಅನುಷ್ಟುಪ್ಪು(4) 4 ಪಾದಗಳು ಪ್ರತಿ ಪಾದಕ್ಕೂ 8 ಅಕ್ಕರಗಳು, ಪಾದದ ಕೊನೆಯದು ಲಗದ್ವಯ ಅಥವಾ ದ್ವಿಲಗ (u-u-) ಅಥವಾ ಶ್ಲೋಕ 4 ಪಾದಗಳು, ಪ್ರತೀ ಪಾದಕ್ಕೆ 8 ಅಕ್ಕರಗಳು, ಪ್ರತಿ ಪಾದದ ಮೊದಲಕ್ಕರದ ಮುಂದೆ ನಗಣ, ಸಗಣ ಬರಕೂಡದು. ಸರಿ (even/ಸಮ) ಪಾದಗಳಲ್ಲಿ ಏಳನೆಯ ಅಕ್ಕರವು ಲಘುವಾಗಿರ ಬೇಕು ಮತ್ತು ಬೆಸ (odd/ವಿಷಮ) ಪಾದಗಳಲ್ಲಿ ನಾಲ್ಕನೆಯ ಅಕ್ಕರದ ಮುಂದೆ ಯಗಣವು ಬರಬೇಕು (ಇವೆರಡರಲ್ಲಿ ಯಾವುದು ಎಂದು ಗುರುತಿಸಿಕೊಳ್ಳಬೇಕು)
ಅತೂನ ಇಂ | ದ್ರಕೌಶಿಕಂ |
ಮಂದಸಾನ । ಸುತಂ ಪಿಬ ।
ನವ್ಯಮಾಯು । ಪ್ರಸೂತಿರ |
ಕೃಧೀಸಹ । ಸ್ರಸಾಮೃಷಿಂ | (ಪು 24-25)
ಪೆರನಾವನ್ ಧರಾಚಕ್ರ ।
ಕೈರೆಯಂ ಕೆಳೆಯಪ್ಪವಂ
ಎನಗಾರೆಣೆಯೆಂಬನ್ನಂ ।
ಕುರಿತಬ್ಬಿಗೆ ಬನ್ನಮಂ (ಪು. 26-27)
ಇಲ್ಲಿ ಉಲ್ಲೇಖಿಸಿದ ಪು. ಸಂಖ್ಯೆ ಮಳಿಗಿ ಎಸ್. ಆರ್. (2006) ಅವರ ಪುಸ್ತಕದವು
ತ್ರಿಷ್ಟುಪ್ (4) 11 ಅಕ್ಕರದ ನಾಲ್ಕು ಪಾದಗಳು (ಒಂದು ಪಾದಕ್ಕೆ ಮೂರು ಗಣಗಳಿದ್ದು?) ಕೊನೆಯದು ಮೂರು ಆಕ್ಕರದ ಗಣವು ‘ಯಗಣ’
ಅಗಿದೆ.
ಕಸ್ಯನೂನಂ | ಕತಮಸ್ಯಾ । ಮೃತಾನಾಂ |
ಮನಾಮಹೇ । ಚಾರುದೇವ । ಸ್ಯನಾಮ ।
ಕೋನೋಮಹ್ಯಾ । ಆದಿತಯೇ । ಪುನರ್ದಾತ್
ಪಿತರಂಚ | ದೃಶೇಯಂ ಮಾ | ತರಂಚ|
ಉಷ್ಣಿಕ್ (4) 7 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಸುರಪಮರುದೀಶಂ|
ಬರುತಿರಲಜಸ್ರಂ |
ಸರಸಿಜದಳಾಕ್ಷೀ|
ನೆರೆತಿಳಿ ವಿತಾನಂ ||
ಬೃಹತಿ (4) 9 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಪಾವಕಂ ಸುರಪನಗ್ನಿಯುಂ |
ಈವಿಧಂ ಬರಲು ಲೋಕದೊಳ್||
ಕೋವಿದರ್ ನೆರೆದು ಬಾವಿಪರ್|
ಭಾವೆ ಕೇಳ್ ನಿರುತ ಭದ್ರಕಂ ||
ಪಂಕ್ತಿ (4) 10 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಜಾತವೇದ ಭಾನು ಜ್ವಾಲೀಶರ್ವರ್
ಭಾತ ಶೈಲ ವಿಶ್ರ ಮಂ ಬರಲ್ಕಾ
ಭೂತಳಾಗ್ರದಲ್ಲಿ ಭೂರಿಭೋಗಂ
ಜಾತೆ ಕೇಲ್ ಮಯೂರ ಸಾರಿವೃತ್ತಂ
ಜಗತಿ (4) 12 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಶರಂ ವಾರಿ ನೀರಂ ಕು ಶಂಗಳ್ ಸಮೇತಂ|
ಬರಲ್ ಸದ್ವಿರಾಮಂ ಪ್ರ ಭಾದಂತಿಸಂಜ್ಞಂ |
ಇರಲ್ಕೀವಿಶೇಷಂ ಮ ಹೀಸುಪ್ರಣೀತಂ |
ಸರೋಜಾಕ್ಷಿಯೇ ಕೇಳ್ ಭು ಜಂಗಪ್ರಯಾತಂ||
ಅತಿ ಜಗತಿ (4) 13 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಸಾರಸವೈರಿ ವಹ್ನಿ ದಿವಿಜೇಂದು ಶಿವಂ
ಮಾರಮಣೀಯ ಮಾದ ವಡಿಯಂಶದೊಳಂ
ಚಾರುವಿವೇಕ ಶಾಲಿಗಳ ಸಮ್ಮತದಿಂ
ಸಾರವಿಚಾರ ಶೀಲೆ ಜಲದಂ ಸತಿ ಕೇಳ್
ಶಕ್ವರಿ (4) 14 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಇಂದು ಮಿಹಿರಾನಿಲ ಸು ರೇಂದ್ರ ಭವಯುಗ್ಮಂ |
ಚಂದದ ವಿರಾಮ ನಿಧಿ ಸಂಜ್ಞೆಯೊಳುದಾತ್ತಂ |
ಬಂದರದು ಪಂಡಿತರ ಭಾವದೆ ಸುರಾರಂ |
ಎಂದಱಿದು ನೋಡು ಮುದ ದಿ ವನಮಯೂರಂ |
ಅತಿ ಶಕ್ವರಿ (4) 15 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಬುಧವರ ಗಣಯುಗ್ಮಂ ಮುಂತೆ ಭೂವಾರಿಯುಗ್ಮಂ|
ವಿಧಿಪದದಿ ಬರಲ್ಕಾ ವಿಶ್ರಮಂ ಮಾಲಿನೀ ಕೇಳ್|
ಬುಧಜನನಿಹವಕ್ಕಂ ಭೂರಿ ಸಂತೋಷಮಕ್ಕುಂ |
ವಿಧುಮುಖಿ ನಿನಗೆಂದುಂ ಪೇೞ್ವುದೇಂ ಕೇಳ್ವುದೆಂದುಂ ||
ಅಷ್ಟಿ (4) 16 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ವಿರೋಚನಂ ಕೃಶಾನು ಭಾನು ನೀತಿಹೋತ್ರಮಿತ್ರ ಗಂ
ಸರೋಜಪಾಣಿ ವಿಶ್ರಮಂ ದಿ ಶಂ ಕರಂ ವಿರಾಜಿಸಲ್
ಸರಾಗದಿಂದೆ ಕೇಳು ಪಂಚ ಚಾಮರಂ ಧರಾಗ್ರಗೊಳ್
ಪರಾನುಕೂಲಪಂಡಿತರ್ಗ ಮಿಷ್ಟಮಾಗದಿರ್ಪುದೇ
ಅತಿ ಅಷ್ಟಿ (4) 17 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಮೊದಲಯಿದುಗಣ ಸುರಪ ತುದಿಯಲಿ ಗಗಂಗಳ್ |
ಒದಗಿ ಬರಲದು ವಿರಾಮ ವಿಧುದರನೊಳಾಗಲ್ ||
ಮುದವೆರಸಿ ಸದಯರಹ ಬುಧರಿಗಿದು ಪಾಲಾ |
ಶದಳವಿದು ಬಗೆಯಿಳೆಗೆ ಚತುರವೆನೆ ಧನ್ಯೇ ||
ದೃತಿ(4) 18 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ಪಾವಕಾನಿಲಪದ್ಮಭಾಂಧವ ಭಾನುಚಂದ್ರಕೃತಾನುಗಳ್|
ಮಾವರಾಪ್ತವಿರಾಮಮುಂ ಬರೆ ಮತ್ತ ಕೋಕಿಲಮೆಂಬುದೇಂ|
ಭಾವಜಾರಿಯ ಭಕ್ತಸಂಕುಲ ಭುಕ್ತಿಮುಕ್ತಿವಿಧಾಯಿನೀ|
ಸಾವಧಾನದೆ ಕೇಳು ಸರ್ವರ ಸಮ್ಮತಂ ತಿರಿಲೋಕದೊಳ್ ||
ಕೃತಿ(4) 20 ಅಕ್ಕರದ ನಾಲ್ಕು ಪಾದಗಳು. (ಸಾಲುಗಳಿಗೆ ಮಿತಿಯಿಲ್ಲ?)*
ನೆಗೞ್ದಾ ಭಾರತಮಲ್ಲ ಶಂತನುಜಬಾಣಾಘಾತದಿಂ ಬೀಮಭೀ
ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ
ರಗೆಯೊಕ್ಕಿಲ್ಗೆಯಾಗಿ ಬಿೞ್ದ ಭಟರಿಂ ಬಿೞ್ದಶ್ವದಿಂ ಬಿೞ್ಧ ದಂ
ತಿಗಳಿಂದಂ ಜವನುಂಡು ಕಾಱುದವೊಲಾಯ್ತೆತ್ತಂ ಕುರುಕ್ಷೇತ್ರದೊಳ್
(ಪು. 14, ರನ್ನನ “ಗದಾಯುದ್ಧ ಸಂಗ್ರಹ” )

 

ಇಲ್ಲಿ * ತೋರಿಸಿದ ಸಂಸ್ಕೃತ ಛಂದಸ್ಸಿನ ಮಾಹಿತಿ ನಂದಿಛಂದಸ್ಸು 19ನೆಯ ಶತಮಾನದ ಅನಾಮದೇಯ ಕೃತಿಯಿಂದ. ಅಲ್ಲಿ ಈ ಛಂದಸ್ಸುಗಳಿಗೆ ಸಾಲುಗಳ ಮಿತಿ ಕೊಟ್ಟಿಲ್ಲ

ಕೊನೆಯದಾಗಿ ಬದಲಾಯಿಸಿದ್ದು: November 21, 2023 06:20 ಪ್ರದೀಪ್ ಬೆಳಗಲ್

Leave a Reply

Your email address will not be published. Required fields are marked *

 

ವರ್ಣ|ಅಕ್ಷರ ಗಣ ಛಂದಸ್ಸು

ವರ್ಣ ಗಣ ಛಂದಸ್ಸಿನ ಅಕ್ಕರ ಗಣಗಳ ವಿವರ:
ಯ: u – -; ಮ: – – -; ತ: – – u; ರ: – u -; ಜ: u – u ; ಭ: – u u; ನ: u u u; ಸ: u u -;

ಇಂದ್ರಜ ವೃತ್ತ : (1) ಎಲ್ಲ ಸಾಲುಗಳೂ ತತಜ|ಗುಗು

ತಾನಿಂದ್ರ । ವಜ್ರಂ | ತತಜಂಗಯುಗ್ಯಂ ॥ (ಪು. 30, ಮಳಿಗಿ, 2006)

ಭುಜಂಗ ಪ್ರಯಾತಂ ವೃತ್ತ : (1) ಎಲ್ಲ ಸಾಲುಗಳೂ ಯಯಯಯ, 7ನೆಯ ಅಕ್ಷರಕ್ಕೆ ಯತಿ

ಭುಜಂಗ | ಪ್ರಯಾತಂ । ಬರಲ್ ನಾ । ಲ್ಕು ಯಂಗಳ್ ॥ (ಪು. 31, ಮಳಿಗಿ, 2006)

ವಸಂತ ತಿಲಕ ವೃತ್ತ : (1) ಎಲ್ಲ ಸಾಲುಗಳೂ ತಭಜಜ|ಗುಗು, 14 ಅಕ್ಕರಗಳು

ಅಕ್ಕುಂ ವಸಂತ ತಿಲಕಂ । ತಭಜಂಜಗಂಗಂ ॥ (ಪು. 31, ಮಳಿಗಿ, 2006)

ಮಾಲಿನೀ ವೃತ್ತ : (1) ಎಲ್ಲ ಸಾಲುಗಳೂ ನನಮಯಯ, 15 ಅಕ್ಕರಗಳು

ಬಿಡದೆ ಸೆಪಲ ರಿಂದಂ | ಪೊಣ್ಮುತಿರ್ಪ ಚ್ಛಗಂಪಂ॥ (ಪು. 31-32, ಮಳಿಗಿ, 2006)

ಉತ್ಸವ ವೃತ್ತ : (1) ಎಲ್ಲ ಸಾಲುಗಳೂ ರಜರಜರ, 15 ಅಕ್ಕರಗಳು, 8ನೆಯ ಅಕ್ಕರಕ್ಕೆ ಯತಿ

ಭಾಸುರೇಭ ವಾಜಿವಾಹಿ । ನೀಸಮೇತನಾಗಿ ತಾಂ। (ಪು. 32, ಮಳಿಗಿ, 2006)

ಹರಿಣೀ ವೃತ್ತ : (1) ಎಲ್ಲ ಸಾಲುಗಳೂ ನಸಮರಸ|ಲಗು, 17 ಅಕ್ಕರಗಳು, 6, 4(?)ಕ್ಕೆ ಯತಿ

ಹರಿಣಿಯೆನಿಪಾ | ವೃತ್ತಂ ತೋರಲ್ । ನಸಂಮರಸಂಲಗಂ ॥ (ಪು. 33, ಮಳಿಗಿ, 2006)

ಶಿಖರಿಣೀ ವೃತ್ತ : (1) ಎಲ್ಲ ಸಾಲುಗಳೂ ಯಮನಸಭ|ಲಗು, 17 ಅಕ್ಕರಗಳು, 6,7ನೇ ಅಕ್ಕರಗಳಿಗೆ ಯತಿ

ಯಮಂನಂಸಂತೋರಲ್ । ಶಿಖರಿಣಿಯದೊಂದಲ್ । ಭಲಗಮುಂ॥ (ಪು. 33, ಮಳಿಗಿ, 2006)

ಮಲ್ಲಿಕಾ ಮಾಲೆ ವೃತ್ತ : (1) ಎಲ್ಲ ಸಾಲುಗಳೂ ರಸಜಜಭರ, 18 ಅಕ್ಕರಗಳು, 10ನೆಯ ಅಕ್ಕರಕ್ಕೆ ಯತಿ

ಮಲ್ಲಿಕಾಯುತಮಾಲೆಯಪ್ಪುದು | ರಂಸಜಂಜಭರಂಬರಲ್॥ (ಪು. 34, ಮಳಿಗಿ, 2006)

ಶಾರ್ಧೂಲ ವಿಕ್ರೀಡಿತ ವೃತ್ತ : (1) ಎಲ್ಲ ಸಾಲುಗಳೂ ಮಸಜಸತತ|ಗು, 19 ಅಕ್ಕರಗಳು, 12ನನೆ ಅಕ್ಕರಕ್ಕೆ ಯತಿ

ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲವಿಕ್ರೀಡಿತಂ॥ (ಪು. 35, ಮಳಿಗಿ, 2006)

ಉತ್ಪಲ ಮಾಲ ವೃತ್ತ : (1) ಎಲ್ಲ ಸಾಲುಗಳೂ ಭರನಭಭರ|ಲಗು, 20 ಅಕ್ಕರಗಳು, 12ನೆಯ ಅಕ್ಕಕ್ಕೆ ಯತಿ

ಶ್ರೀಯನರಾತಿ ಸಾಧನಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ (ಪು. 35, ಮಳಿಗಿ, 2006)

ಸ್ರಗ್ಧರಾ ವೃತ್ತ : (1) ಎಲ್ಲ ಸಾಲುಗಳೂ ಮರಭನಯಯಯ, 21ಅಕ್ಕರಗಳು, 13ನೆಯ ಅಕ್ಕರಕ್ಕೆ ಯತಿ

ತೋರಲ್ ಮಂ | ರಂಭನಂ | ಮೂಯಗ | ಣಮುಮ | ದೆತಾಂ ಸ್ರ | ಗ್ಧರಾ ವೃ | ತ್ತಮಕ್ಕುಂ (ಸ್ರಗ್ಧರಾ ವೃತ್ತ)

ಮಹಾಸ್ರಗ್ಧರಾ ವೃತ್ತ : (1) ಎಲ್ಲ ಸಾಲುಗಳೂ ಸತತನಸರರ|ಗು, ಅಕ್ಕರಗಳು

ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ |ವೃತ್ತಮ|ಕ್ಕುಂ (ಮಹಾಸ್ರಗ್ಧರಾ ವೃತ್ತ)

ಮತ್ತೇಭವಿಕ್ರೀಡಿತ ವೃತ್ತ : (1) ಎಲ್ಲ ಸಾಲುಗಳೂ ಸಭರನಮಯ|ಲಗು , 20 ಅಕ್ಕರಗಳು

ಜಗದೊಳ್ ಸನ್ನಿದಮಾದ ನಾಳ್ನುಡಿಗಳಿಂ ಛಂದಕ್ಕೆ ಬರ್ಪಂತು ನೆ

(ವಿಕಿಪೀಡಿಯಾ ಮತ್ತೇಭವಿಕ್ರೀಡಿತ ವೃತ್ತ)

ಚಂಪಕ ಮಾಲಾ ವೃತ್ತ : (1) ಎಲ್ಲ ಸಾಲುಗಳೂ ನಭಜಜಜರ, 21 ಅಕ್ಕರಗಳು

ಗುರು ವಿನನೆ ತ್ತರಂಕು ಡಿವೆನ ಪ್ಪೊಡೆವಂ ದ್ವಿಜವಂ ಶಜಂನಿ ಜಾ (ವಿಕಿಪೀಡಿಯಾ ಚಂಪಕ ಮಾಲಾ ವೃತ್ತ)

ಮಂದಾಕ್ರಾಂತ ವೃತ್ತ : (1) ಎಲ್ಲ ಸಾಲುಗಳೂ ಮಭನತತ+2ಗು, 17 ಅಕ್ಕರಗಳು

ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ ಪ್ರಮತ್ತಃ (ಪು. 117, ಪುಟ್ಟಪ್ಪ, 1988)

ಅನವದ್ಯ ವೃತ್ತ : (1) ಎಲ್ಲ ಸಾಲುಗಳೂ ಮಭನತತ+2ಗು, 17 ಅಕ್ಕರಗಳು

ಕರೆದು ಮಕ್ಕಳನಾಕೆಯೆ ಕಟ್ಟೇಕಾಂತದೆ ಪೇೞುತೆ ಸಂದುದಂ
ಭರದೆ ಸೂಚಿಸಿದಳ್ ಸುತರೆಲ್ಲರ್ ತಾಯಿಯೊ ದಾಸ್ಯಕೆ ಸಲ್ಲದಂ-
ತರರೆ! ಕಾಯ್ವುದು ನಿಮ್ಮಯ ಕರ್ತವ್ಯಂ ಜವದಿಂ ಹಯಪುಚ್ಛಕಂ
ನೆರೆದೊಡಪ್ಪುದು ಬಾಲಮೆ ಕರ್ಪಿಂದೊಪ್ಪುತೆ ಗೆಲ್ವೆನದಾಗಳಾಂ
(ಗಣೇಶ ಕೊಪ್ಪಲತೋಟ ಕಥಾಕಾಲಬೇಟಿ: 03-01-2023)

ಕನಕಾಬ್ಜಿನಿ ಅಥವಾ ನರ್ಕುಟಕ ವೃತ್ತ? : (1) ಎಲ್ಲ ಸಾಲುಗಳೂ ನಜಭಜಜ|ಲಗು 18 ಅಕ್ಕರಗಳು

ಬಿಣಮಣಿ ಅನ್ತ ಭೋಗಿ ಬಿಣದುಳ್ಮಣಿ ಚಿಲ್ಮನ ದೋಳ್
ರಣಮುಖದುಳ್ಳ ಕೋಲಂ ನೆರಿಯರ್ಕುಮನಿನ್ದ್ಯಗುಣನ್
ಪ್ರಣಯಿ ಜನಕ್ಕೆ ಕಾಮನಸತೋತ್ಪಲ ವರ್ಣನವನ್
(ನಾಗಭೂಷಣ ಸಿ. ಶಾಸನ ಮತ್ತು ಛಂದಸ್ಸುಬೇಟಿ : 03-01-2023)

ಅಂಶ ಗಣ ಛಂದಸ್ಸು

ಪಿರಿಯಕ್ಕರ(1) 4 ಪಾದಗಳು, ಪ್ರತಿಪಾದದಲ್ಲಿ 1 ಬ್ರ, 5ವಿ, 1 ರು-ಹೀಗೆ 7
ಬ್ರ|ವಿ|ವಿ|ವಿ|ವಿ|ವಿ|ರು* ಬೀರ|ದಳವಿಯ|ನನ್ನಿಯ|ಚಾಗದ |ಶಾಸನಂ| ಚಂದ್ರಾರ್ಕ| ತಾರಂಬರಂ
ದೊರೆಯಕ್ಕರ(1) 4 ಪಾದಗಳು; ಪ್ರತಿಪಾದದಲ್ಲಿ 2 ವಿ, 1 ಬ್ರ, 2 ವಿ, 1ಬ್ರ- ಹೀಗೆ 6 ಗಣಗಳು,
ವಿ|ವಿ|ಬ್ರ|ವಿ|ವಿ|ಬ್ರ ಸರಸಿಜೋ|ದರ ಗಣ|ಮೆರಡ|ಜನುಮಲ್ಲಿ| ನರೆದಿರ್ಕೆ| ಮತ್ತಂ
ನಡುವಕ್ಕರ(1) 4 ಪಾದಗಳು; ಪ್ರತಿಪಾದದಲ್ಲಿ 1 ಬ್ರ 3 ವಿ, 1 ರು-ಹೀಗೆ ನಾಲ್ಕು ಗಣಗಳು.
ಬ್ರ|ವಿ|ವಿ|ವಿ|ರು ನುಡಿಗು|ಮೋಪನ|ಪಡೆಮಾತ|ನಾತನಿ|ರ್ದೆಡೆಗೆ ವಕ್ಕುಂ|
ಎಡೆಯಕ್ಕರ(1) 4 ಪಾದಗಳು; ಪ್ರತಿಪಾದದಲ್ಲಿ 1 ಬ್ರ 2 ವಿ, 1 ರು-ಹೀಗೆ ನಾಲ್ಕು ಗಣಗಳು.
ಬ್ರ|ವಿ|ವಿ|ರು ಕರಜ|ಮೆರಡರಿಂ|ಬೆಕ್ಕು ಪಾ| (ಯ್ವಾ)ಪಾಂಗಿನಿಂ|
ಕಿರಿಯಕ್ಕರ(1) 4 ಪಾದಗಳು; ಪ್ರತಿಪಾದದಲ್ಲಿ 2ವಿ, 1ರು-ಹೀಗೆ 3 ಗಣಗಳು.
ವಿ|ವಿ|ರು ಪೊಡೆಯಲ|ರವರಿರ್ವರ್|ಮೊದಲೊಳಿರ್ಕೆ|
ತ್ರಿಪದಿ(3/3) 4 3 ಪಾದಗಳು; ಲಿ ಅನುಕ್ರಮವಾಗಿ 4, 4, 3 ಹೀಗೆ ಒಟ್ಟು 11 ಗಣಗಳು ಲಿ 6, 10ನೆಯದು ಬ್ರಹ್ಮ, ಉಳಿದವು ವಿಷ್ಣು; ಮೊದಲನೆಯ ಪಾದದಲ್ಲಿ 2ನೆಯ ಗಣವಾದ ಮೇಲೆ ಯತಿ, 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ (ಒಳಪ್ರಾಸ); ಎರಡನೆಯ ಪಾದದಲ್ಲಿ ಮೊದಲ 3 ಗಣಗಳನ್ನು ಹೇಳಿ, ನಿಲ್ಲಿಸಿ, ಈಗ ಮತ್ತೆ ಹಿಂದಕ್ಕೆ ಬಂದು ಆ ಪಾದದ ಆ 3 ಗಣಗಳನ್ನೂ 4ನೆಯ ಗಣವನ್ನೂ ಒಟ್ಟಿಗೆ ಹೇಳಿ, ಬಳಿಕ 3ನೆಯ ಪಾದವನ್ನು ಮುಗಿಸಬೇಕು
ವಿ|ವಿ|ವಿ
|ವಿ|ವಿ|ಬ್ರ
|ವಿ|ವಿ|ವಿ|ಬ್ರ
ಎಂಟೆಲೆ | ಮಾವಿನ | ದಂಟಿನ|
ಲ್ಲಿರುವೋಳೆ ಘಂಟೆಯ | ಗತಿಗೆ |
ನಲಿಯೋಳೆ | ಸರಸಾತಿ ಗಂಟಲ | ತೊಡರ | ಬಿಡಿಸವ್ವ
ಏಳೆ(2/4) 2 ಪಾದಗಳು ಕ್ರಮವಾಗಿ 4.3 ಹೀಗೆ 7 ಗಣಗಳು. ಇವುಗಳಲ್ಲಿ 6ನೆಯದು ಬ್ರಹ್ಮ, ಉಳಿದವು ವಿಷ್ಣು; ಮೊದಲನೆಯ ಪಾದದಲ್ಲಿ 2ನೆಯ ಗಣವಾದ ಮೇಲೆ ಯತಿ 3ನೆಯ ಗಣದಲ್ಲಿ ದ್ವಿತೀಯಾಕ್ಷರ ಪ್ರಾಸದ ಆವೃತ್ತಿ (ಒಳಪ್ರಾಸ).
ವಿವಿವಿವಿ
ವಿಬ್ರವಿ
ಹಡೆದ ತಾ|ಯಿಗೆ ಬನ್ನಿ| ಹಡೆದ ತಂ| ದೆಗೆ ಬನ್ನಿ|
ಪಡೆದ ಗಂ|ಡನಿಗೆ ನಮ ಬನ್ನಿ ||
ಚೌಪದಿ(1) 4 ಪಾದಗಳು; ಪ್ರತಿಪಾದದಲ್ಲಿ 1ವಿ, 1ರು,-ಹೀಗೆ 2 ಗಣಗಳು.
ವಿ|ರು ರತಿಹೀನಂ | ಪೆಳವಂ ಕುಬ್ಚಂ |
ಚಂದೋವಸಂತ (1) 4 ಪಾದಗಳು; ಪ್ರತಿಪಾದದಲ್ಲಿ 3 ವಿ, 1 ಬ್ರ-ಹೀಗೆ 4 ಗಣಗಳು (ಜಯಕೀರ್ತಿಯ ಪ್ರಕಾರ 4 ಪಾದಗಳು, ಪ್ರತಿಪಾದದಲ್ಲಿ 1 ವಿ,4 ಬ್ರ-ಹೀಗೆ 5 ಗಣಗಳು.)
ವಿ|ವಿ|ಬ್ರ ಮಂದರ| ಧರಗಣ| ಮೆಸೆದಿರೆ| ಮೊದಲೊಳ್|
ಅಕ್ಕರಿಕೆ(1) 4 ಪಾದಗಳು. ಪ್ರತಿಪಾದದಲ್ಲಿ ವಿ, ಬ್ರ, ವಿ, ಬ್ರ, ವಿ,ರು-ಹೀಗೆ 6 ಗಣಗಳು 6ನೆಯ ಅಕ್ಷರಕ್ಕೆ 2 ಸಾರಿ ಯತಿ, ನಾಗವರ್ಮನ ಪ್ರಕಾರ (ಜಯಕೀರ್ತಿಯ ಪ್ರಕಾರ; ವಿ, ಬ್ರ, ವಿ, ಬ್ರ, ವಿ, ವಿ, +ಗುರು [ರು=ವಿ+ಗು] ಪ್ರತಿಪಾದದಲ್ಲಿಯೂ 26 ಮಾತ್ರೆಗಳಂತೂ ಇರಬೇಕು) 4 ಪಾದಗಳಲ್ಲಿ ಒಟ್ಟುಮಾತ್ರಾಸಂಖ್ಯೆ 104; 8-8 ಮಾತ್ರೆಗಳಿಗೊಮ್ಮೆ 2 ಸಾರಿ ಯತಿ. ಅಥವಾ ಅಂಶಗಣದ ಬದಲು ಜಗಣವಲ್ಲದ 6 ಚತುರ್ಮಾತ್ರಾಗಣಗಳು+ಗುರು ಕೂಡ ಬರಬಹುದು.
ವಿ|ಬ್ರ|ವಿ|ಬ್ರ|ವಿ|ರು ಸುರನುತ | ಚರಣೇ| ವರಗುಣ|ಭರಣೇ|ಖರರುಚಿ | ಬಿಂಬಗತೇ|
ಮದನವತಿ(1) 4 ಪಾದಗಳು; ಪ್ರತಿಪಾದದಲ್ಲಿ 5ವಿ + 1 ಗುರು ಅಥವಾ 4ವಿ + 1ರು ಅಥವಾ 3ರು + 1ವಿ. ಇವುಗಳಲ್ಲಿ ಮೊದಲನೆಯ ಎರಡರ ನಡುವೆ ವಾಸ್ತವವಾಗಿ ಭೇದವೇನಿಲ್ಲ. ಅವೆರಡೂ ಪುರ್ತಿಪದ್ಯಕ್ಕೆ ಹೊಂದುತ್ತದೆ; ಕೊನೆಯದು ಹೊಂದುವುದಿಲ್ಲ.
ವಿ|ವಿ|ವಿ|ವಿ|ವಿ+ಗು ಅಥವಾ ವಿ|ವಿ|ವಿ|ವಿ|ರು+ಗು ಉದಾ. ಮೊದಲನೆಯದಕ್ಕೆ:
ಮದನನ| ತಂದೆಯ| ಗಣಮವು| ವಿಷಯದೊ|ಳಿರೆ ಗುರು|ಮುಂ
ಗೀತಿಕೆ (2) ನಾಲ್ಕು ಪಾದಗಳು; 1 ಮತ್ತು 2ನೆಯ ಪಾದಗಳಲ್ಲಿ ಕ್ರಮವಾಗಿ 3 ಮತ್ತು 4 ಗಣಗಳು ಒಟ್ಟು 7 ಗಣಗಳು. 2,6ನೆಯವು ಬ್ರಹ್ಮ, ಉಳಿದವು ವಿಷ್ಣು ಅಥವಾ ರುದ್ರ. ಸಮ ಅರ್ಧ
3|3|3
ವಿಬ್ರವಿ
ರುಬ್ರರು
ಎರಡರೊ । ಳಾರೆಂ । ಬಾಸಂಖ್ಯೆಯೊಳ್ |
ಬರೆಪದ್ಯ। ಭವನುಳಿ । ದುವು ಮೆ ಚ್ಚುವ ತೆರದಿಂ ॥
(ವಿವರಗಳು ವಿಕಿಪೀಡಿಯಾ, ಉದಾ. ಪು. 81)
ಉತ್ಸಾಹ (1) 4 ಪಾದಗಳು, ಪ್ರತಿ ಪಾದದಲ್ಲಿ 7 ಬ್ರ + 1ಗುರು. ಕೊನೆಯ ಗುರು, ಲಯಗ್ರಾಹಿಯಾಗಿ ಮುನ್ನಡೆಯುತ್ತದೆ .
ಬ್ರ।ಬ್ರ।ಬ್ರ।ಬ್ರ।ಬ್ರ।ಬ್ರ।ಬ್ರ+ಗು ಊರ| ಕಡೆಯ| ತೊರೆಯ| ತಡಿಯ| ಕರೆಯ| ಕಲ್ಲ| ಮೋಙ| ದಿಮ್
ಷಟ್ಪದ (ಅಂಶಗಣ ಷಟ್ಪದಿ) (3) 3-3 ಪಾದಗಳ 2 ಸಮಾರ್ಧಗಳನ್ನುಳ್ಳ 6 ಪಾದಗಳು; ಪುರ್ವಾರ್ಧದಲ್ಲಿ 1, 2 ಮತ್ತು 3ನೆಯ ಪಾದಗಳಲ್ಲಿ ಕ್ರಮವಾಗಿ 2ವಿ, 2ವಿ ಮತ್ತು 2ವಿ+1ರು-ಹೀಗೆ ಬರುವಂತೆ 7 ಗಣಗಳು ಸಮ ಅರ್ಧ
ವಿ|ವಿ|
ವಿ|ವಿ|
ವಿ|ವಿ|ರು
ಅದು ಪರ | ಮಾಸ್ಪದ |
ಮದು ಪುಣ್ಯ | ಸಂಪದ |
ಮದು ಮಹಾ | ಭ್ಯುದಯ ವಿ | ಲಾಸಾವಾಸಂ
ಸಾಂಗತ್ಯ (2) ಎರಡು ಸಮಾರ್ಧಗಳನ್ನುಳ್ಳ 4 ಪಾದಗಳು. ಪುರ್ವಾರ್ಧದ 1, 2ನೆಯ ಪಾದಗಳಲ್ಲಿ ಕ್ರಮವಾಗಿ 4 ಮತ್ತು 3 ವಿಷ್ಣು ಗಣಗಳು
ವಿ | ವಿ | ವಿ | ವಿ
ವಿ | ವಿ | ವಿ
ಎಲೆ ಪ್ರಿಯೆ | ಕೇಳು ತೊ | ಳದ ಮುತ್ತು | ಕರತಳಾ
ಮಳಕವೀ | ಕಥೆ ಸೊಬ | ಗಿನ ಸೋನೆ ||

 

ಟಿಪ್ಪಣಿ

 

 


ಇಲ್ಲಿ ಬಳಸಿರುವ ಉದಾಹರಣೆಗಳು ಛಂದಸ್ಸಿನ ಸಾಮಾನ್ಯ ಲಕ್ಷಣಗಳಿಗೆ ಹೊಂದಿಕೆಯಾಗುತ್ತವೆ. ನೆನಪಿರಲಿ ಇದು ಕಿರುಮಾಹಿತಿ. ಹೆಚ್ಚಿನ ಮಾಹಿತಿಗೆ ಇಲ್ಲಿನ ಉಲ್ಲೇಖಗಳು ಮತ್ತು ಬೇರೆಡೆ ದೊರೆಯುವ ಮಾಹಿತಿಯನ್ನು ಸೇರಿಸಿ ಅರ್‍ಥೈಸ ಬೇಕು. ಛಂದಸ್ಸು ಕೇವಲ ಲಘು, ಗಣದ ಲೆಕ್ಕ ಮಾತ್ರವಲ್ಲ ಅದು ಯತಿ, ಪ್ರಾಸ ಮುಂ. ಅದರ ಭಾಗ. ಇಲ್ಲಿ ಲಘು, ಗಣದ ಲೆಕ್ಕಕ್ಕೆ ಮಾತ್ರ ಸೀಮಿತ, ಈ ಕಾರಣಕ್ಕೆ ಇದೊಂದು ಪದ್ಯದ “ಛಂದಸ್ಸು ಸೂಚಕ” (ಪತ್ತೆ ಹಚ್ಚಲು ಸಹಾಯಕ) ಮಾತ್ರ.

 

ಇಲ್ಲಿ ಬಳಸಬೇಕಾದ ಪಠ್ಯ ಯುನಿಕೋಡಿನಲ್ಲಿರ ಬೇಕು. ನಿಮ್ಮ ಪದ್ಯಗಳು ನುಡಿ ತಂತ್ರಾಂಶದಲ್ಲಿದ್ದರೆ ಅದನ್ನು ಅರವಿಂದ್ ಅವರ ಸಂಕ ವೆಬ್‌ಸೈಟಿನಲ್ಲಿ ಯುನಿಕೋಡಿಗೆ ಬದಲಾಯಿಸಿಕೊಳ್ಳಿ.

 

 

ಉಲ್ಲೇಖಗಳು

 

 

 

  • ಮಳಿಗಿ. ಎಸ್.ಆರ್. 2006, ಕನ್ನಡ ಛಂದಸ್-ಶಾಸ್ತ್ರ (ಸಾರ ಸಂಗ್ರಹ), ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
  • “ನಂದಿಛಂದಸ್ಸು” (ರಚನೆಕಾರ ತಿಳಿಯದ ಕೃತಿ), ಸಂ. ಮಂ. ಆ. ರಾಮಾನುಜಯಂಗಾರ್‍ಯ, 1909, ಮೈಸೂರು (ಜಿ. ಟಿ. ಎ. ಮುದ್ರಾಶಾಲೆ)
  • ರನ್ನ ಕವಿ, ಗದಾಯುದ್ಧ ಸಂಗ್ರಹ, ಸಂ. ತೀ. ನಂ. ಶ್ರೀಕಂಠಯ್ಯ, , 1949, ಮೈಸೂರು, ಕಾವ್ಯಾಲಯ)
  • ಪುಟ್ಟಪ್ಪ ಕೆ. ವಿ., 1988, ಕನ್ನಡ ಕೈಪಿಡಿ (ಸಂ. 1), 1949, ಮೈಸೂರು, ಮೈಸೂರು, ಮೈಸೂರು ವಿಶ್ವವಿದ್ಯಾನಿಲಯ
  • ಕನ್ನಡ ಛಂದಸ್ಸು, ವಿಕಿಪೀಡಿಯ
  • ಕನ್ನಡ ದೀವಿಗೆ ಬೇಟಿ ತಾರೀಖು (accessed on) 01-12-2022
  • ನಾಗಭೂಷಣ ಸಿ, ಶಾಸನ ಮತ್ತು ಛಂದಸ್ಸು ಬೇಟಿ ತಾರೀಖು (accessed on) 03-1-2023
  • ಗಣೇಶ ಕೊಪ್ಪಲತೋಟ, ಕಥಾಕಾಲ ಬೇಟಿ ತಾರೀಖು (accessed on) 03-1-2023
  • ಅಂಶಗಣದ ಬಹುತೇಕ ಮಾಹಿತಿ ವಿಕಿಪೀಡಿಯಾದ “ಕನ್ನಡ ಛಂದಸ್ಸು” ನಿಂದ, ಅನವದ್ಯ ವೃತ್ತದ ಬಗೆಗೆ ಗಣೇಶ ಕೊಪ್ಪಲತೋಟ ಅವರ ವೆಬ್ ಪುಟ ಹಲವು ವೆಬ್ ಪುಟಗಳ ಮಾಹಿತಿಯೂ ಪಡೆಯಲಾಗಿದೆ (ಪಟ್ಟಿ ತೀರ ಉದ್ದ)